ಸಾಯುತ್ತಿರುವಾತನ ಉದ್ಘಾರವಿದಲ್ಲ. ಬದುಕಿರುವವರೆಲ್ಲರ ಕೂಗು ಇದು. ನೀರಿಗೆ ಜೀವನ ಎಂತಲೂ ಕರೆಯುತ್ತಾರೆ. ಈಜೀವ ಇರುವುದೇ ನೀರಿನಿಂದಾಗಿ ಜೀವಹುಟ್ಟಿಕೊಂಡದ್ದೂ
ನೀರಿನಿಂದಲೇ!
ನೀನು ಯಾರು ಎಂದು ಯಾರಾದರು ನಿಮ್ಮನ್ನು ಕೇಳಿದರೆ,
“ಮುಕ್ಕಾಲುಪಾಲುನೀರು”ಎನ್ನುವುದೇ ನೂರು
ಶೇಖಡಾ ಸರಿಯಾದ ಉತ್ತರ. ಇನ್ನು
ಕಾಲು ಭಾಗ ನೀವು ಯಾರು ಎಂಬುದು ನಿಮಗೂ ಗೊತ್ತಿಲ್ಲ. ನೀವಷ್ಟೇಅಲ್ಲ, ಒಂದು
ಸಸ್ಯವನ್ನೋ, ಹಣ್ಣನ್ನೋ,
ಬೆಕ್ಕನ್ನೋಎತ್ತಿಕೊಳ್ಳಿ, ಅದರಶೇಕಡಾ 70ಕ್ಕಿಂತ ಹೆಚ್ಚು ಭಾಗವು ನೀರಿನಿಂದಲೇ ಆಗಿರುತ್ತದೆ.
ಅಷ್ಟೇಕೆ ಭೂಮಿಯ ಮೇಲ್ಮೈನ ಶೇಕಡಾ
70% ರಷ್ಟು ಭಾಗಗವು ನೀರಿನಿಂದಾವರಿಸಿದೆ.
ಇಷ್ಟುನೀರಿದ್ದರೂ ಅದರಲ್ಲಿ ಕುಡಿಯಲು ಯೋಗ್ಯವಾದ
ನೀರು ನೂರರಲ್ಲಿ ಒಂದು ಪಾಲಷ್ಟೇ!
ನೀರಿನಿಂದ ಜೀವಿಗಳು ಹುಟ್ಟಿಕೊಂಡಿದ್ದಷ್ಟೇಅಲ್ಲ,
ಅನೇಕ ನಾಗರೀಕತೆಗಳೂ ಹುಟ್ಟಿಕೊಂಡಿವೆ.
ನೀರಿಗಾಗಿ ನಡೆದಜಗಳಗಳಿಗೆ ಕೊನೆಮೊದಲು ಎಂಬುದೇಇಲ್ಲ.
ಇತಿಹಾಸದ ಗರ್ಭದಲ್ಲಿ ಇಂತಹಎಷ್ಟೋ ಜಗಳಗಳು
ಮುಗುಮ್ಮಾಗಿ ಮುದುಡಿಕೊಂಡಿದೆ. ಅವು
ಆಗಾಗ ಎದ್ದು ಬಂದು ಸಾರ್ವಜನಿಕ ನಳ್ಳಿಗಳ ಬಳಿ, ಮಂಡ್ಯ,
ಮೈಸೂರು ಮತ್ತಿತರ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ
ಹರಿವ ನದಿ ಪಾತ್ರದ ಬಳಿ ಕಾಣಿಸಿಕೊಳ್ಳುತ್ತದೆ. ನೀರಿನಿಂದಲೇ
ಜನ ಬದುಕಿಕೊಂಡಿರುವಂತೆ, ನೀರಿಗಾಗಿ
ನಡೆವ ಜಗಳಗಳಿಂದಲೇ ಕೆಲವರು ಬದುಕಿಕೊಂಡಿದ್ದಾರೆ!
ಇಬ್ಬರು ಹೀರೋಗಳು ತಮ್ಮಬದುಕಿಗೆ ಆಕ್ಸಿಜನ್ ಆಗಬಲ್ಲ
ಒಬ್ಬಳು ಹೀರೋಯಿನ್ಗಾಗಿ ಹೊಡೆದಾಡುವ
ಕಥೆ ಇರುವ ಸಿನೆಮಾಗಳು ನಮ್ಮಲ್ಲಿ ಬಹಳಷ್ಟಿವೆ. ಅವುಗಳಲ್ಲೊಂದಕ್ಕೆH2O
ಎಂದೇ ಹೆಸರಿರುವುದು ನಿಮಗೆ ಗೊತ್ತು.
“ನೀರು ಬರೀ H2O ಅಲ್ಲ-ಜಲಜನಕ ಮತ್ತು ಆಮ್ಲಜನಕಗಳ ಪರಿಪೂರ್ಣಕಾಂಬಿನೇಷನ್
ಅಷ್ಟೇಅಲ್ಲ; ಇದರಲ್ಲಿ ಇನ್ನೆನೋ ಇದೆ. ಅದೇ
ನೀರನ್ನು ಇಷ್ಟು ಮಹತ್ವದ ವಸ್ತುವನ್ನಾಗಿಸಿದೆ”ಎಂದ ಡಿ.ಎಚ್.ಲಾವರೆನ್ಸ್ರ ಮಾತನ್ನುಇಲ್ಲಿ ಹೇಳಲೇಬೇಕು. ಅಂತಹದ್ದೇನಿದೆ ನೀರಿನಲ್ಲಿ?
ನೀರಿನ ಒಂದು ಅಣುವಿನಲ್ಲಿ ಇರುವುದು ಎರಡು ಜಲನಕದಪರಮಾಣುಳು
ಮತ್ತು ಹೈಡ್ರೋಜನ್ ಪರಮಾಣು. ಇವುಗಳ
ನಡುವೆ ಎಲೆಕ್ಟ್ರಾನ್ ಹಂಚಿಕೆಯಿಂದಾದ ಒಂದು ಕೋವಲೆಂಟ್ ಬಂಧ! ಅಕ್ಕಪಕ್ಕದ ಎರಡು ನೀರಿನ ಅಣುಗಳ ನಡುವೆ ಇನ್ನೂ
ಒಂದು ಬಂಧ ಇರುತ್ತದೆ- ಅದೇ ಜಲಜನಕದ
ಬಂಧ. ಈಬಂಧದಿಂದಾಗಿಯೇ ನೀರು ಸಾಮಾನ್ಯ
ತಾಪದಲ್ಲಿ ದ್ರವರೂಪದಲ್ಲಿರಲು ಸಾಧ್ಯವಾಗಿರುವುದು. ಈ
ಬಂಧದಿಂದಾಗಿಯೇ ನೀರುಸಾರ್ವತ್ರಿಕ ದ್ರಾವವಾಗಿರುವುದು. ಈಬಂಧದಿಂದಾಗಿಯೇ ನಾವು-ನೀವು, ಜೀವಿಗಳೆಲ್ಲ ಬದುಕಿರುವುದು!
ಯಾವೋಗ್ರಹಾಮ್ ಎನ್ನುವವರು ನೀರನ್ನು 21ನೇಶತಮಾನದ ಪೆಟ್ರೋಲಿಯಂ ಎಂದುಬಣ್ಣಿಸಿದ್ದಾರೆ.
ಇದೊಂದು ಅತ್ಯಂತ ತಪ್ಪು ಹೋಲಿಕೆ.
ನೀರಿಗೆ ಹೋಲಿಕೆಯಾಗಬಲ್ಲ ಅಥವಾ ಬದಲಿಯಾಗಬಲ್ಲ
ಇನ್ನೊಂದು ವಸ್ತು ಇಲ್ಲವೇ ಇಲ್ಲ. ಪೆಟ್ರೋಲ್
ಇಲ್ಲದೇ ಮಾನವ ಬದುಕಬಹುದು. ಹಾಗೆನೋಡಿದರೆ
ತುಂಬಾ ಉತ್ತಮವಾಗೇ ಬದುಕಬಹುದು-ವಾಯುಮಾಲಿನ್ಯಮುಕ್ತವಾಗಿ,
ಪೆಟ್ರೋಲ್ಗಾಗಿ ನಡೆಯಬಲ್ಲ ಯುದ್ಧದ ಭೀತಿ ಇಲ್ಲದೆ.
ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆನಿರ್ಜಲೀಕರಣಎನ್ನುತ್ತಾರೆ.
ಸೈನೋಸೈಟಿನ್ನಿಂದ ಕ್ಯಾನ್ಸರ್ವರೆಗೆ ಅನೇಕಖಾಯಿಲೆಗಳಿಗೆ ನೀರಿನ ಕೊರತೆಯೂ ಒಂದುಕಾರಣ.
ಕಡಿಮೆ ನೀರುಕುಡಿಯುವುದು ಮತ್ತು ಮೂತ್ರಕೋಶದ
ಕ್ಯಾನ್ಸರ್ಗೆ ತೀರಾ ಹತ್ತಿರದ
ಸಂಬಂಧವಿದೆಯಂತೆ. ಕನಿಷ್ಟ ಪಕ್ಷ
ಆರು ಗ್ಲಾಸ್ ನೀರನ್ನು ಪ್ರತಿದಿನ ಕುಡಿಯುವವರಿಗೆ ಹೃದಯಾಘಾತ ಮತ್ತು ಪಕ್ಷವಾತದ ಸಾಧ್ಯತೆ ಶೇಕಡಾ ಐವತ್ತರಷ್ಟು
ಕಡಿಮೆಯಂತೆ. ಮೂತ್ರಕೋಶದಲ್ಲಿ ಹರಳುಂಟಾಗುವಿಕೆಯನ್ನು
ನೀರುಕುಡಿಯುವುದರಿಂದನಿವಾರಿಸಬಹುದು. ಇನ್ನೊಂದುವಿಷಯ
ಎಲ್ಲರಿಗೂ ತಿಳಿದೇ ಇದೆ. ಸಾಕಷ್ಟು
ಪ್ರಮಾಣದಲ್ಲಿ ನೀರುಕುಡಿಯುವವರಷ್ಟೇ ಬೆಳಗ್ಗೆ ಶೌಚಕ್ಕೆಂದು ಹೋದಾಗ ಏನಾದರೂ ಸಾಧನೆ ಮಾಡಿಯಾರು,
ಇಲ್ಲದಿದ್ದರೆವ್ಯರ್ಥಕಾಲಹರಣಮಾತ್ರ!
ಮಲಬದ್ಧತೆಯೇ ನೂರಾರುಕಾಯಿಗಳ ಮಹಾತಾಯಿ ಎಂಬುದನ್ನು
ಬೇರೆಹೇಳಬೇಕೇ? ತೂಕಕಡಿಮೆಮಾಡಿಕೊಳ್ಳಬೇಕಾದರೆ
ನೀರುಕುಡಿಯಬೇಕು-ಇದರಲ್ಲಿಕೊಬ್ಬಿಲ್ಲ.
ಕೊಲೆಸ್ಟ್ರಾಲ್ಇಲ್ಲ, ಕ್ಯಾಲೋರಿಯಂತೂ ಇಲ್ಲವೇ ಇಲ್ಲ. ನಾವುಉಸಿರಾಡುವ ಗಾಳಿಯಲ್ಲಿ ನೀರಿದ್ದರಷ್ಟೇ ಅನಿಲ
ವಿನಿಮಯ ಸಾಧ್ಯ. ಯಂತ್ರಗಳ ಚಲಿಸುವಭಾಗಗಳ
ಕೀಲುಗಳಲ್ಲಿ ಲ್ಯೂಬ್ರಿಕಂಟ್ ಇರುವ ಹಾಗೆ ನಮ್ಮಕೈ-ಕಾಲುಗಳ
ಕೀಲುಗಳಿಗೆ ನೀರುಬೇಕು. ಬೆನ್ನುಮೂಳೆಗಳ
ಸಣ್ಣಸಣ್ಣ ಸಂದುಗಳಲ್ಲಿಯೂ ನೀರು ಹೈಡ್ರಾಲಿಕ್ ಸಸ್ಪೆನ್ಷೆನ್ ತರಹಕೆಲಸ ಮಾಡುತ್ತದೆ.
ನಿನ್ನ ಮೆದುಳಲ್ಲಿ ಏನು ತುಂಬಿಕೊಂಡಿದೆಯೋ ಎಂದು
ಕೆಲವರು ಹೀಯಾಳಿಸುವುದುಂಟು. ಮೆದುಳಿನ ತೂಕದ ಶೇಕಡಾ 85ರಷ್ಟು ನೀರೇ
ಇರುವುದು.
ಆದ್ಧರಿಂದ,ಸಾಕಷ್ಟು ನೀರು ಕುಡಿಯಿರಿ.ನೀರೆಂದರೆ ಚಹಾ ಅಲ್ಲ,ಕಾಫಿ ಅಲ್ಲ,ಕೋಲಾ ಅಲ್ಲ...ನೀರೆಂದರೆ ನೀರು!
**************
ಉದಯ ಗಾಂವಕಾರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ